IIC – SSSUHE Innovation Competition, 1st June 2023 – 30th June 2024 (IIC – SSSUHE ಇನ್ನೋವೇಷನ್ ಸ್ಪರ್ಧೆ ೧ನೇ ಜೂನ್ ೨೦೨೩ – ೩೦ನೇ ಜೂನ್ ೨೦೨೪)

The Innovation & Incubation Centre (IIC) of Sri Sathya Sai University for Human Excellence (SSSUHE), invites proposals from citizens of India giving information about innovative ideas to solve the problems of rural people in India. Applicants may submit their proposals either under Category A or Category B. The IIC will give cash awards to proposals in both categories as described below.

ಶ್ರೀ ಸತ್ಯಸಾಯಿ ಯೂನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ (SSSUHE)ನ ಇನ್ನೋವೇಷನ್ ಮತ್ತು ಇನ್ಕುಬೇಷನ್ ಸೆಂಟರ್ (IIC), ಭಾರತದ ಗ್ರಾಮೀಣ ಜನರ ಸಮಸ್ಯೆಗಳನ್ನು ಪರಿಹರಿಸಲು, ಹೊಸ ಆಲೋಚನೆಗಳ ಬಗ್ಗೆ ಮಾಹಿತಿ ನೀಡುವಂತಹ ಭಾರತದ ನಾಗರೀಕರಿಂದ ಪ್ರಸ್ತಾಪಗಳನ್ನು ಆಹ್ವಾನಿಸಿದೆ. ಅರ್ಜಿದಾರರು ತಮ್ಮ ಪ್ರಸ್ತಾವನೆಗಳನ್ನು ಪ್ರಶಸ್ತಿ ವರ್ಗ ‘ಎ’ ಅಥವಾ ವರ್ಗ ‘ಬಿ’ ಅಡಿಯಲ್ಲಿ ಸಲ್ಲಿಸಬಹುದಾಗಿದೆ. ಈ ಕೆಳಗೆ ವಿವರಿಸಿದಂತೆ ಎರಡೂ ವಿಭಾಗಗಳಲ್ಲಿನ ಪ್ರಸ್ತಾವನೆಗಳಿಗೆ IIC ವತಿಯಿಂದ ನಗದು ಪ್ರಶಸ್ತಿಗಳನ್ನು ನೀಡಲಾಗುತ್ತದೆ.

Award Category ‘A’

Only applicants giving information about their own innovative idea may apply under Category A. Under this category, a cash award of Rs.50000/- each will be given to the three best innovative ideas which can solve problems of rural people in the areas of agriculture, health, energy, water, sanitation, household or utility, transportation, livestock leading to: reduction of human effort, generation of employment, development of plant varieties, development of herbal remedies for humans/animals/farming or development of low-cost environment-friendly technologies. Creative ideas which may not have been developed into solutions/prototypes may also be submitted. Only residents of Karnataka are eligible to apply for this award.

ಪ್ರಶಸ್ತಿ ವರ್ಗ ‘ಎ’

ತಮ್ಮದೇ ಆದಂತಹ ಹೊಸ ಬಗೆಯ ಕಲ್ಪನೆಯ ಬಗ್ಗೆ ಮಾಹಿತಿ ನೀಡುವ ಅರ್ಜಿದಾರರು ಮಾತ್ರ ಪ್ರಶಸ್ತಿ ವರ್ಗ ‘ಎ’ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಕೃಷಿ, ಆರೋಗ್ಯ, ಶಕ್ತಿ, ನೀರು, ನೈರ್ಮಲ್ಯ, ಗೃಹೋಪಯೋಗ, ಸಾರಿಗೆ, ಜಾನುವಾರುಗಳಿಗೆ ಸಂಬಂಧಿಸಿದಂತೆ ಮಾನವ ಶ್ರಮದ ಕಡಿತ, ಉದ್ಯೋಗದ ಸೃಷ್ಟಿ, ಸಸ್ಯ ಪ್ರಭೇದಗಳ ಅಭಿವೃದ್ಧಿ, ಮಾನವರು/ಪ್ರಾಣಿಗಳು/ಕೃಷಿಗೆ ಸಂಬAಧಿಸಿದAತೆ ಹಾಗೂ ಕಡಿಮೆ ವೆಚ್ಚದ ಪರಿಸರ ಸ್ನೇಹಿ ತಂತ್ರಜ್ಞಾನದ ಬೆಳವಣಿಗೆಗಾಗಿ ಗಿಡಮೂಲಿಕೆಗಳನ್ನು ಅಭಿವೃದ್ಧಿಪಡಿಸುವುದು. ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಪರಿಹಾರಗಳನ್ನು ಹಾಗೂ ಮಾದರಿಗಳನ್ನು ಇನ್ನೂ ಯಾರೂ ಅಭಿವೃದ್ಧಿಪಡಿಸದಿದ್ದಲ್ಲಿ ಅಂತಹ ಸೃಜನಶೀಲ ವಿಚಾರಗಳನ್ನು ಸಹ ಸಲ್ಲಿಸಬಹುದು. ಈ ವರ್ಗದ ಅಡಿಯಲ್ಲಿ ಮೇಲೆ ತಿಳಿಸಿದ ಕ್ಷೇತ್ರಗಳಲ್ಲಿ ಗ್ರಾಮೀಣ ಜನರ ಸಮಸ್ಯೆಗಳನ್ನು ಪರಿಹರಿಸುವ ಮೂರು ಅತ್ಯುತ್ತಮ ವಿನೂತನ ಕಲ್ಪನೆಗಳಿಗೆ, ಶೋಧನೆಗಳಿಗೆ ತಲಾ ರೂ.೫೦,೦೦೦/- ನಗದು ಪ್ರಶಸ್ತಿಯನ್ನು ನೀಡಲಾಗುವುದು.

ಕರ್ನಾಟಕದ ನಿವಾಸಿಗಳು ಮಾತ್ರ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರು.

Award Category B

Applicants who can give information about innovations or innovative ideas of an innovator in Karnataka should apply under Category B. Under this category, individuals/journalists/organizations giving information to IICSSSUHE about any innovative idea or work that can be recognized under Category A will be awarded Rs. 25000/- each for the three most suitable proposals. The applicant should give sufficient information for IIC to either study the innovation or contact the innovator. Any resident of India is eligible to apply for this award.

ಪ್ರಶಸ್ತಿ ವರ್ಗ ‘ಬಿ’

ಕರ್ನಾಟಕದಲ್ಲಿ ಸಂಶೋಧಕರ ಹೊಸ ಆವಿಷ್ಕಾರಗಳು ಅಥವಾ ನವೀನ ಆಲೋಚನೆಗಳ ಬಗ್ಗೆ ಮಾಹಿತಿ ನೀಡಬಹುದಾದ ಅರ್ಜಿದಾರರು ಪ್ರಶಸ್ತಿ ವರ್ಗ ‘ಬಿ’ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕು. ಈ ವರ್ಗದಲ್ಲಿ ವ್ಯಕ್ತಿಗಳು/ಪತ್ರಕರ್ತರು/ಸಂಸ್ಥೆಗಳು IIC-SSSUHE ಗೆ ಹೊಸ ಕಲ್ಪನೆಗಳ ಅಥವಾ ಪ್ರಶಸ್ತಿ ವರ್ಗ ‘ಎ’ ಅಡಿಯಲ್ಲಿ ಗುರುತಿಸಬಹುದಾದ ಯಾವುದೇ ಕೆಲಸದ ಬಗ್ಗೆ ಮಾಹಿತಿ ನೀಡುವ ಮೂರು ಅತ್ಯಂತ ಸೂಕ್ತವಾದ ಪ್ರಸ್ತಾಪಗಳಿಗೆ ತಲಾ ರೂ.೨೫,೦೦೦/- ನಗದು ಪ್ರಶಸ್ತಿಯನ್ನು ನೀಡಲಾಗುವುದು. ಹೊಸತನವನ್ನು ಅಧ್ಯಯನ ಮಾಡಲು ಅಥವಾ ಸಂಶೋಧಕರನ್ನು ಸಂಪರ್ಕಿಸಲು IIC ಗೆ ಸಾಕಷ್ಟು ಮಾಹಿತಿಯನ್ನು ನೀಡಬೇಕು.

ಭಾರತದ ಯಾವುದೇ ನಿವಾಸಿ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

Incubation Support

IIC-SSSUHE will select good suitable ideas under Category A and support them for making working models and testing them, if necessary. A financial support of up to Rs.5 lakhs per idea will be given by IIC for model making and testing.

ಇನ್ಕುಬೇಷನ್ ಬೆಂಬಲ

IIC-SSSUHE ಯು ವರ್ಗ ‘ಎ’ ಅಡಿಯಲ್ಲಿ ಉತ್ತಮವಾದ ಸೂಕ್ತ ಆಲೋಚನೆಗಳನ್ನು ಆಯ್ಕೆ ಮಾಡುತ್ತದೆ, ಹಾಗೂ ಅಗತ್ಯವಿದ್ದಲ್ಲಿ ಕಾರ್ಯನಿರ್ವಹಿಸುವ ಮಾದರಿಗಳನ್ನು ತಯಾರಿಸಲು ಮತ್ತು ಅವುಗಳನ್ನು ಪರೀಕ್ಷಿಸಲು ಸೂಕ್ತ ಬೆಂಬಲ ನೀಡುತ್ತದೆ. ಜೊತೆಗೆ ಆಯ್ಕೆಯಾದ ಪ್ರತಿ ಹೊಸ ಕಲ್ಪನೆಗಳ ಮಾದರಿಗಳ ತಯಾರಿಕೆಗೆ ಮತ್ತು ಪರೀಕ್ಷೆಗೆ IIC ಸಂಸ್ಥೆಯ ವತಿಯಿಂದ ೫ ಲಕ್ಷದವರೆಗೆ ಹಣಕಾಸಿನ ನೆರವು ನೀಡಲಾಗುತ್ತದೆ.

Procedure for submission of proposals to IIC-SSSUHE (IIC-SSSUHE ಗೆ ಪ್ರಸ್ತಾವನೆಗಳನ್ನು ಸಲ್ಲಿಸುವ ವಿಧಾನ)

  •  Category 'A' proposals can be submitted online by clicking below (ವರ್ಗ ‘ಎ’ ನ ಪ್ರಸ್ತಾವನೆಗಳನ್ನು ಕೆಳಗೆ ಕ್ಲಿಕ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು)

Alternatively, you can copy the link below into your browser's address bar (ಪರ್ಯಾಯವಾಗಿ ನೀವು ನಿಮ್ಮ ಬ್ರೌಸರ್‌ನ ವಿಳಾಸ ಪಟ್ಟಿಯಲ್ಲಿ ಕೆಳಗಿನ ಲಿಂಕ್‌ನ್ನು ನಕಲು ಮಾಡಿಕೊಳ್ಳಬಹುದು) https://forms.office.com/r/8NtxpDcdvi

                                               

  • Category 'B' proposals can be submitted online by clicking below (ವರ್ಗ ‘ಬಿ’ ನ ಪ್ರಸ್ತಾವನೆಗಳನ್ನು ಕೆಳಗೆ ಕ್ಲಿಕ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು)

Alternatively, you can copy the link below into your browser's address bar (ಪರ್ಯಾಯವಾಗಿ ನೀವು ನಿಮ್ಮ ಬ್ರೌಸರ್‌ನ ವಿಳಾಸ ಪಟ್ಟಿಯಲ್ಲಿ ಕೆಳಗಿನ ಲಿಂಕ್‌ನ್ನು ನಕಲು ಮಾಡಿಕೊಳ್ಳಬಹುದು)   https://forms.office.com/r/fe2P4vV4bJ

 

Important Information to Applicants

  1. After submission, the Applicant will automatically receive a copy of the submission along with a unique reference number as an acknowledgement. The Applicant may retain the acknowledgement as evidence that the idea was submitted to the IIC-SSSUHE.

  2. Any supporting documents, photos or videos regarding the new practice/innovation can be emailed to communication.iic@sssuhe.ac.in

  3. The IIC-SSSUHE will keep the applicant’s idea confidential and use it only for the intended purpose of encouraging innovation in society.

  4. The IIC-SSSUHE reserves the right to conduct a prior art search/market search/patent search to evaluate the applicant’s proposal in all respects.

  5. The IIC-SSSUHE has an MoU with National Innovation Foundation-India (https://nif.org.in) under which the IIC and NIF may either independently or jointly incubate the applicant’s idea based on their independent assessments. An award-winning entry in Category A will not automatically qualify for incubation support.

  6. The IIC-SSSUHE’s decision in all matters including the evaluation of the Applicant's idea/innovation will be final and binding on the applicant. IICSSSUHE reserves the right to alter the number of awards in each category and/or the time frame for submission of applications if need be.

 

ಅರ್ಜಿದಾರರಿಗೆ ಮುಖ್ಯ ಮಾಹಿತಿ

೧. ಅರ್ಜಿದಾರನು/ಳು ಅರ್ಜಿಯನ್ನು ಸಲ್ಲಿಸಿದ ದಾಖಲೆಯಾಗಿ ಒಂದು ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

೨. ಹೊಸ ಪದ್ಧತಿ/ನಾವೀನ್ಯತೆ ಕುರಿತಂತೆ ಯಾವುದೇ ಸಹಾಯಕ ದಾಖಲೆಗಳು, ಫೋಟೋಗಳು ಅಥವಾ ವೀಡಿಯೊಗಳನ್ನು communication.iic@sssuhe.ac.in ಇಲ್ಲಿಗೆ ಇ-ಮೇಲ್ ಮಾಡಬಹುದು.

೩. IIC-SSSUHE ಯು ಅರ್ಜಿದಾರರ ಹೊಸ ಕಲ್ಪಿತ ಆಲೋಚನೆಯನ್ನು ಗೌಪ್ಯವಾಗಿಡುತ್ತದೆ ಮತ್ತು ಸಮಾಜದಲ್ಲಿ ಹೊಸ ಶೋಧನೆಯನ್ನು ಉತ್ತೇಜಿಸುವ ಉದ್ದೇಶಕ್ಕಾಗಿ ಮಾತ್ರ ಬಳಸುತ್ತದೆ.

೪. IIC-SSSUHE ಯು ಅರ್ಜಿದಾರರ ಪ್ರಸ್ತಾವನೆಯನ್ನು ಮೌಲ್ಯಮಾಪನ ಮಾಡಲು ಎಲ್ಲಾ ರೀತಿಯ ನೈಜತೆ ಪರೀಕ್ಷೆ, ಮಾರುಕಟ್ಟೆ ಹಾಗೂ ಪೇಟೆಂಟ್ ಹುಡುಕಾಟ ನಡೆಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.

೫. IIC-SSSUHE ಯು ರಾಷ್ಟ್ರೀಯ ಇನ್ನೋವೇಷನ್ ಫೌಂಡೇಶನ್- ಇಂಡಿಯಾ (https://nif.org.in) ನೊಂದಿಗೆ ಒಂದು MOU ಅನ್ನು ಹೊಂದಿದೆ. ಅದರ ಅಡಿಯಲ್ಲಿ IIC ಮತ್ತು NIF ಸ್ವತಂತ್ರವಾಗಿ ಅಥವಾ ಜಂಟಿಯಾಗಿ ತಮ್ಮ ಸ್ವತಂತ್ರ ಮೌಲ್ಯಮಾಪನಗಳ ಆಧಾರದ ಮೇಲೆ ಅರ್ಜಿದಾರರ ಹೊಸ ಆಲೋಚನೆಯನ್ನು ಉತ್ತೇಜಿಸಿ ಸಂಶೋಧನೆ ಕಾರ್ಯರೂಪಕ್ಕೆ ಬರಲು ಸಹಾಯ ಮಾಡಬಹುದು.

‘ಎ’ ವರ್ಗದಲ್ಲಿನ ಪ್ರಶಸ್ತಿ-ವಿಜೇತ ಪ್ರವೇಶವು ಇನ್‌ಕ್ಯುಬೇಷನ್‌ನ ಬೆಂಬಲಕ್ಕಾಗಿ ಸ್ವಯಂಚಾಲಿತವಾಗಿ ಅರ್ಹತೆ ಪಡೆಯುವುದಿಲ್ಲ.

೬. ಅರ್ಜಿದಾರರ ಕಲ್ಪನೆ/ಆವಿಷ್ಕಾರದ ಮೌಲ್ಯಮಾಪನ ಸೇರಿದಂತೆ ಎಲ್ಲಾ ವಿಷಯಗಳಲ್ಲಿ IIC-SSSUHE ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಅರ್ಜಿದಾರರಿಗೆ ಬದ್ಧವಾಗಿರುತ್ತದೆ. IIC-SSSUHE ಪ್ರತಿ ವಿಭಾಗದಲ್ಲಿ ಪ್ರಶಸ್ತಿಗಳ ಸಂಖ್ಯೆಯನ್ನು ಅಥವಾ ಅಗತ್ಯವಿದ್ದಲ್ಲಿ ಅರ್ಜಿಗಳನ್ನು ಸಲ್ಲಿಸುವ ಸಮಯದ ಚೌಕಟ್ಟನ್ನು ಬದಲಾಯಿಸುವ ಹಕ್ಕನ್ನು ಕಾಯ್ದಿರಿಸಿದೆ.

 

 

Last Date for Submission

The last date for submission of proposals is 30th June 2024.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಪ್ರಸ್ತಾವನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ೩೦ನೇ ಜೂನ್ ೨೦೨೪.

 

Contact Us

For clarifications of questions/doubts an email may be sent to communication.iic@sssuhe.ac.in

ನಮ್ಮನ್ನು ಸಂಪರ್ಕಿಸಿ

ಪ್ರಶ್ನೆಗಳು/ಅನುಮಾನಗಳ ಸ್ಪಷ್ಟೀಕರಣಕ್ಕಾಗಿ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಇ-ಮೇಲ್ ಅನ್ನು ಕಳುಹಿಸಬಹುದು commmunication.iic@sssuhe.ac.in

 
Scroll to Top